Wednesday, 13 June 2012

ನೆನೆನೆನೆದು ನೆನೆಯುತ್ತ ನಿನ್ನನ್ನೇ ನಾ !!!!!!!!!

ನೆನೆನೆನೆದು ನೆನೆಯುತ್ತ ನಿನ್ನನ್ನೇ ನಾ !!!!!!!!!
********************************************

ನೆನೆನೆನೆದು ನಿನ್ನೆ ನಾಳೆಗಳ
ನಿನಗಾಗಿ ನಾನಿಂದು ನುಡಿಯುವೆ
ನನ್ನೆದೆಯಾಳದ ನಾಲ್ಕು ನುಡಿಗಳ
ನಿನ್ನುಸಿರಾಗಿ ನನ್ನೆದೆಯಲ್ಲವಿತಿವೆ
ನಿನ್ನಾ ನೂರಾರು ನೆನಪುಗಳು

ಸವಿ ಸುಂದರ ಸ್ನೇಹದ ಸಮಯ
ಸಂಗಾತಿಯೇ ಸ್ವಪ್ನ ಸುಂದರಿಯೇ
ಸ್ಪೂರ್ತಿಯ ಸಂಗೀತವು ಸಾಹಿತ್ಯವು
ಸಪ್ತಸ್ವರಗಳ ಸುಮಧುರಾಮೃತವು
ಸಂಜೆ ಸೂರ್ಯನ ಸ್ವರ್ಣಾಲಂಕಾರವು

ನೆನೆನೆನೆದು ನಿನ್ನಾ ನೆನೆಪುಗಳ
ನೆನಪುಗಳೊಡನೆ ನೀರಿನೋಕುಳಿ
ನಾನಲ್ಲಿ ನೆನೆನೆನೆದು ನಡುಗಿದೆ
ನಾ ನಿಂತಲ್ಲೇ ನಿಂತು ನೆನೆಯುತ್ತ
ನಾ ನಿನ್ನನ್ನೇ ನೆನೆಯುತ್ತ ನೆನೆನೆನೆದು

|| ಪ್ರಶಾಂತ್ ಖಟಾವಕರ್ ||

No comments:

Post a Comment