Tuesday 26 November 2013

ಬಾಲ್ಯದ ಭೂತ .. !!

ಬಾಲ್ಯದ ಭೂತ .. !!

ಕಥೆಯನ್ನು ಬರೆಯಲು ವಿಭಿನ್ನ ವಿಚಾರಗಳ ಚಿಂತನೆಯಲ್ಲಿರುವಾಗ ನೆನಪಾದದ್ದು ನನ್ನ ಬಾಲ್ಯದ ಕೆಲವು ಕ್ಷಣಗಳು .. ಅದಕ್ಕೆ ಕೆಲವು ದಿನಗಳು ಅದರ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುತ್ತಾ ನೆನಪಾದ ಕೆಲವು ಸಣ್ಣ ಸಣ್ಣ ಘಟನೆಗಳನ್ನು ಒಂದುಗೂಡಿಸಿ ಕಥೆಯೊಂದನ್ನು ಕಟ್ಟುವ ಪ್ರಯತ್ನ.. ಈ ಕಥೆಯು ನನ್ನ ಬಾಲ್ಯದ ನೆನಪುಗಳಲ್ಲಿ ಒಂದು ವಿಶೇಷ ಪುಟವಾಗಿದೆ .. ಇದು ನಾನು ಹುಬ್ಬಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ಇದ್ದಾಗ ನಡೆದದ್ದು .. ಆ ವರ್ಷದಲ್ಲೇ ಅಲ್ಲಿ ಅನೇಕ ಬಗೆಯ ವಿಚಾರಗಳ ಹೊಸ ಪರಿಚಯ .. ಅದಕ್ಕೂ ಮೊದಲು ಐದನೇಯ ತರಗತಿಯವರೆಗೂ ಚಿತ್ರದುರ್ಗದಲ್ಲಿ ನನ್ನ ಬಾಲ್ಯದ ದಿನಗಳನ್ನು ಅನುಭವಿಸಿದ್ದೇನೆ .. ಆದರೆ ಚಿತ್ರದುರ್ಗದಲ್ಲಿ ಕಂಡಿದ್ದ , ಕಲಿಯುತ್ತಿದ್ದ ವಾತಾವರಣ , ದುರ್ಗದ ಕೋಟೆ ಹಾಗೂ ಇನ್ನೂ ಅನೇಕ ವಿಚಾರಗಳ ಪರಿಚಯ ಕಥೆಯ ನಡುವಲ್ಲಿ ಹೇಳುತ್ತೇನೆ..  ಅದಕ್ಕೂ ಮೊದಲು ಹುಬ್ಬಳ್ಳಿಯ ನೆನಪುಗಳ ಜೊತೆಯಲ್ಲಿ ಕಥೆಯನ್ನು ಆರಂಭಿಸುತ್ತಿರುವ ಉದ್ದೇಶವೇನೆಂದರೆ ಕಥೆಯ ಮುಖ್ಯ ಪಾತ್ರವೆಂದರೆ ನನ್ನ ಪಾತ್ರ .. ಜಗತ್ತಿನ ವಿಭಿನ್ನತೆಯ ವಿಚಿತ್ರವೆನ್ನಿಸುವ ವಿಚಾರಗಳ ಪರಿಚಯವಾದ ದಿನಗಳು .. ಆ ದಿನಗಳನ್ನು ನಾನು ಈಗ ನೆನೆದಾಗ ನೆನಪಿನಲ್ಲಿ ಉಳಿದದ್ದು ನೂರಕ್ಕೆ ನಾಲ್ಕಿರಬಹುದಾದರೂ ದೆವ್ವಗಳು ಭೂತಗಳು ಎನ್ನುವುದರ ಮಾನಸಿಕ ಒತ್ತಡ ಮತ್ತು ಕುತೂಹಲ ಉಂಟಾಗಿದ್ದು ಆ ವರ್ಷದಲ್ಲೇ ಅತೀ ಹೆಚ್ಚು .. ಮತ್ತು ಯಾವುದೋ ಒಂದು ಪಾತ್ರವನ್ನು ಕಲ್ಪನೆ ಮಾಡಿಕೊಂಡು ಬರೆಯುವುದಕ್ಕಿಂದ ಬಾಲ್ಯದ ನನ್ನ ಪಾತ್ರಕ್ಕೆ ಒಂದಷ್ಟು ಬಣ್ಣಗಳ ಹಚ್ಚಿಟ್ಟು ಓದುಗರ ಕುತೂಹಲ ಮತ್ತು ಅವರ ಬಾಲ್ಯದ ನೆನಪುಗಳಲ್ಲಿ ನನ್ನನ್ನು ಹುಡುಕುವ ಪುಟ್ಟದಾದ ಪ್ರಯತ್ನ.. ಇಲ್ಲಿ ಘಟನೆಗಳ ಸಮಯ, ವಸ್ತು, ಸ್ಥಳ ಹಾಗೂ ವ್ಯಕ್ತಿಗಳ ಪರಿಚಯದಲ್ಲಿ ಒಂದಷ್ಟು ಅದಲು ಬದಲಾಗುವ ಸಾಧ್ಯತೆಗಳು ಇವೆ .. ಕಾರಣ ಆ ದಿನಗಳ ಸಂಪೂರ್ಣ ನೆನಪುಗಳು ಇಲ್ಲದಿರುವುದು .. ಹಾಗಾಗಿ ಇಲ್ಲಿ ಪಾತ್ರಗಳ ಹೆಸರುಗಳು ಮಾತ್ರ ಕಾಲ್ಪನಿಕವಷ್ಟೇ .. ಘಟನೆಗಳು ಎಲ್ಲವೂ ಬಾಲ್ಯದ ಅನುಭವಗಳು ಎನ್ನುವುದಂತೂ  ಸತ್ಯ .. !!

ಕಥೆಯನ್ನು ಪ್ರಾರಂಭಿಸುತ್ತ , ಬಾಲ್ಯದ ಆಟಗಲ್ಲಿ ಅನುಭವಿಸಿದ ವಿಚಿತ್ರ ಕ್ಷಣಗಳ ನೆನಪುಗಳು .. ದೆವ್ವ ಭೂತಗಳ ಬಗೆಗಿನ ಕೆಲವು ಅನುಮಾನಾಸ್ಪದ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರ ಹುಡುಕುವ ಯತ್ನದಲ್ಲಿ ಬದಲಾದ ಬದುಕಿನ ಆಲೋಚನೆಗಳು .. >>>>>>>>> visit blog.. !!

>>>>> ಕಥೆ ಕವನ ನಗೆಹನಿ ಹಾಡುಗಳು: ಬಾಲ್ಯದ ಭೂತ .. !!

No comments:

Post a Comment