Wednesday, 27 June 2012

ನಾನು ನನ್ನ ಕವನ ***** ಮುಂದುವರೆದ ಭಾಗ..... >>>>>>> :)



ನಾನು ನನ್ನ ಕವನ 
****************************************
ಮುಂದುವರೆದ ಭಾಗ..... >>>>>>> :)

ಹೌದು ನಾನು ಅವಳನ್ನು ವಿವರವಾಗಿ ಹೇಳಲು ಕೇಳಿದಾಗ ಅವಳು ಹೇಳಿದ್ದು ಇಪ್ಪತ್ತು ವರ್ಷಗಳ ಹಳೆಯ ಕಥೆ .. ಅವಳು ಆ ಕಥೆಯನ್ನು ಹೇಳಲು ಆರಂಭಿಸಿದಳು.. ಆಗ ನಾನು "ಬಾ ಒಳಗೆ ಕೂತು ಮಾತಾಡೋಣ" ಎಂದು ಹೇಳಿದೆ.. ಅದಕ್ಕವಳು "ಇಲ್ಲ ಅಂಕಲ್ ನಾನು ನಿಮಗೀಗ ನಮ್ಮ ಹಳೆಯ ಮನೆಯ ಕಡೆ ಇರೋ ಒಂದು ಕಾರನ್ನು ತೋರಿಸಬೇಕು.. ನೀವು ಬೇಗನೆ ಬನ್ನಿ" ಎಂದಳು.. ಆಗ ಒಂದು ನಿಮಿಷ ಆಕಾಶ ನೋಡಿ "ಇನ್ನೂ ಮೋಡ ತುಂಬಾ ಇದೆ.. ಮಳೆಯೂ ಸಹ ಮತ್ತೆ ಜೋರಾಗಿ ಬರುವ ಸಾಧ್ಯತೆ ಇದೆ..ಅದಕ್ಕೆ ಸ್ವಲ್ಪ ಹೊತ್ತು ಇಲ್ಲೇ ಇದ್ದು ತಿಂಡಿ ತಿಂದು ಹೋಗೋಣ" ಎಂದು ಹೇಳಿ ಅವಳನ್ನು ಮನೆಯೊಳಗೆ ಕರೆದೆ.. ಒಳಗೆ ಹೋಗುತ್ತಿದಂತೆಯೇ ಮತ್ತೆ ನನ್ನ ಮೊಬೈಲ್ ರಿಂಗ್ ಆಯಿತು "ಅಂತೇನಾ ...ಹಮ್ .. ಇಂಕೆಮ್ ಕಾವಾಲ್ಲಿ ... ವೀಲೈತೆ ನಾಲ್ಗು ಮಾಟಲು.. ಕುದಿರಿತೆ ಕಪ್ ಕಾಫಿ" .. ತಕ್ಷಣ ರೂಮಿನೊಳಗೆ ಹೋಗಿ ನೋಡಿದೆ.. ಅದು ಚಾರ್ಜ್ ಮಾಡಲು ಇಟ್ಟಿದ್ದ ಫೋನ್ ಅನ್ ಆಗಿದೆ.. (ಯಾರು ಮಾಡಿದ್ದು ಅಂತಾ ಸಂದೇಹ ಪಡುವ ಅಗತ್ಯವಿಲ್ಲ.. ನನ್ನ ಫೋನ್ ಅಲ್ಲಿ ಟೈಮ್ ಸೆಟ್ ಮಾಡಿದರೆ ಸಾಕು ಅದು ಆನ್ ಆಗುತ್ತೆ) ಈಗ ಆ ಫೋನ್ ಕಾಲ್ ಬಂದದ್ದು ಯಾರದು ಎಂದು ಗೊತ್ತಿಲ್ಲ ಅದು ಸಹ ಗೊತ್ತಿಲ್ಲದ ನಂಬರ್... ಹಾಗೂ ಎತ್ತುವಷ್ಟರಲ್ಲಿ ರಿಂಗ್ ಆಗುವುದು ನಿಂತು ಹೋಗಿತ್ತು ..

ಮತ್ತೆ ಬಂದರೆ ಮಾತನಾಡಲು ಎಂದು ಅದನ್ನು ಕೈಯಲ್ಲೇ ಹಿಡಿದುಕೊಂಡು ರೂಮಿನಿಂದ ಹೊರಗೆ ಬಂದೆ.. ಕವನ ಪೇಪರ್ ಓದುತ್ತ ಕುಳಿತಿದ್ದಳು .. ಆಗ ಅಡುಗೆಮನೆಯ ಒಳಗೆ ಹೋಗಿ ಕಾಫಿ ಮಾಡಲು ಒಲೆಯನ್ನು ಹಚ್ಚಿ ಹಾಲನ್ನು ಕಾಯಲು ಇಟ್ಟೆ.. ಮತ್ತೆ ಫೋನ್ ರಿಂಗ್ ಆಯಿತು ... ಅದೇ ಗೊತ್ತಿಲ್ಲದ ನಂಬರ್ ಮತ್ತೆ ಬಂದದ್ದು .. ರಿಸೀವ್ ಮಾಡಿ "ಹಲೋ ಯಾರು" ಎಂದಾಗ ಆ ಕಡೆಯಿಂದ ಧ್ವನಿ ಸರಿ ಕೇಳುತ್ತಿರಲಿಲ್ಲ .. ಸಿಗ್ನಲ್ ಪ್ರಾಬ್ಲಮ್ ಆಗುತ್ತಿತ್ತು .. ಹೌದು ಮಳೆಗಾಲ ಇದ್ದಾಗ ಅದು ನಾವಿರುವ ಪ್ರದೇಶದಲ್ಲಿ ಹೆಚ್ಚಾಗಿ ಸಿಗ್ನಲ್ ಪ್ರಾಬ್ಲಮ್ ಆಗುತ್ತೆ .. ಹಾಲನ್ನು ಕಾಯಲು ಇಟ್ಟಿದ್ದೇನೆ.. ಹೇಗೆ ಹೊರಗೆ ಹೋಗಿ ಮಾತನಾಡುವದು ಎಂದು ಯೋಚನೆ.. ಸರಿ ಅಲ್ಲಿಯೇ ಹಾಗೋ ಹೀಗೋ ಮಾತಾಡಲು ಪ್ರಯತ್ನಿಸಿದೆ .. ಆದರೂ ಸರಿ ಕೇಳಲಿಲ್ಲ.. ಹೊರಗೆ ಹೋಗುವುದು ಒಳ್ಳೆಯದು ಎಂದುಕೊಂಡು , ಅಡುಗೆಮನೆಯಿಂದ ಹೊರಗೆ ಬಂದು "ಕವನ ಒಂದು ಕೆಲಸ ಹೇಳುವೆ.. ಬೇಸರ ಮಾಡಿಕೊಳ್ಳಬೇಡ.. ಫೋನ್ ಸಿಗ್ನಲ್ ಪ್ರಾಬ್ಲಮ್ ಇದೆ. ನಾನು ಮಾತನಾಡಿ ಬರುವೆ.. ಒಲೆಯ ಮೇಲೆ ಹಾಲು ಕಾಯಲು ಇಟ್ಟಿದ್ದೇನೆ.. ಸ್ವಲ್ಪ ನೋಡುತ್ತಿಯ" ಎಂದು ಕೇಳಿದೆ.. ಅವಳು ಪೇಪರ್ ಓದುತ್ತಾ , ಮಾತನಾಡದೆ ತಲೆಯಾಡಿಸಿ, ಅಗಲಿ ಎಂದು ಒಪ್ಪಿದಳು.. 

ನಾನು ರೂಮಿನ ಕಿಟಕಿಯ ಬಳಿ ಹೋದೆ. ಅಲ್ಲಿ ಸಿಗ್ನಲ್ ಸರಿ ಸಿಗುತ್ತದೆ ಎಂದು.. ಹಾಗೆಯೇ ಕಿಟಕಿಯ ಹೊರಗೆ ನೋಡತ್ತಾ ಮೊಬೈಲ್ ಅನ್ನು ಕಿವಿಗಿಟ್ಟು "ಹಲೋ ಈಗ ಹೇಳಿ ಯಾರು ಏನು ವಿಷಯ" ಅಂತಾ ಹೇಳಿದೆ. ಆ ಕಡೆಯಿಂದ ಬಂದ ಧ್ವನಿ ಆಗ ಸ್ಪಷ್ಟವಾಗಿ ಕೇಳಿಸಿತು.. ಅದು ಹೆಣ್ಣಿನ ಧ್ವನಿ.. "ಹಲೋ ನಾನು ಪ್ರಿಯ ಮಾತಾಡೋದು.. ನೀವು ಕೇಳಿದ ಪುಸ್ತಕ ಸಿಕ್ಕಿದೆ.. ಮನೆಯಲ್ಲಿ ಅದು ಸ್ಟೋರ್ ರೂಂ ಅಲ್ಲಿ ಹಳೆಯ ಪುಸ್ತಕದ ಜೊತೆಯಲ್ಲಿತ್ತು.. ನಿಮಗಾಗಿ ತುಂಬಾ ಕಷ್ಟ ಪಟ್ಟು ಹುಡುಕಿದೆ.. ತುಂಬಾ ಧೂಳು ಅಂಟಿತ್ತು.. ಎಲ್ಲವನ್ನು ಕ್ಲೀನ್ ಮಾಡಿ ಇಟ್ಟಿದ್ದೇನೆ.. ಆದರೆ ಏನಿದೆ.. ಅದರಲ್ಲಿ ಮುಖ್ಯವಾದದ್ದು ಏನು ಬರೆದಿದೆ" ಎಂದು ಪ್ರಿಯ ನನ್ನನ್ನು ಕೇಳಿದಳು.. ನಾನು ಆಗ "ಪ್ರಿಯ ಅದು ನನ್ನ ಜೀವ.. ಆ ಪುಸ್ತಕ ನನ್ನ ಜೀವನದ ಅತೀ ಸುಮಧುರದ ಸವಿ ಕ್ಷಣಗಳ ಸಂಗ್ರಹ.. ಅದರಲ್ಲಿ ಕೆಲವು ಮುಖ್ಯವಾದ ಮಾಹಿತಿಗಳನ್ನು ಬರೆದಿಟ್ಟಿದ್ದೇನೆ.. ಪ್ಲೀಸ್ ನೀನು ಅದನ್ನು ಜೋಪಾನವಾಗಿ ಇಟ್ಟಿರು" ಎಂದು ಹೇಳುವಾಗ ಕಿಟಕಿಯಲ್ಲಿ ನೋಡಿದೆ.. ಹನಿ ಹನಿ ಮಳೆಯು ಮೆಲ್ಲನೆ ಜೋರಾಯಿತು.. ಮತ್ತೆ ಫೋನ್ ಅಲ್ಲಿ "ಪ್ಲೀಸ್ ಪ್ರಿಯ .. ಆ ಬುಕ್ ಕೇರ್`ಫುಲ್ .. ವೆರಿ ವೆರಿ ಇಂಪಾರ್ಟೆಂಟ್ ಬುಕ್.. ಇಟ್ಸ್ ಮೈ ಲೈಫ್ .. ತುಂಬಾ ಜೋಪಾನ.. ನಾನು ಈಗಲೇ ಬರುವೆ" ಎಂದು ಹೇಳಿದೆ..

ಆಗ ಆ ಕಡೆಯಿಂದ ಪ್ರಿಯ ಫೋನಿನಲ್ಲಿ "ನೋ ನೋ ಈಗ ಬೇಡ .. ಮಳೆ ತುಂಬಾ ಜೋರಾಗಿದೆ ಇಲ್ಲಿ.. ಮಳೆ ನಿಂತ ಮೇಲೆ ಬಾ.. ನನ್ನ ಮೇಲೆ ನಂಬಿಕೆ ತಾನೇ.. ನಾನು ಆ ಬುಕ್ ಅನ್ನು ನನ್ನ ಜೀವ ಅಂತಾ ಕಾಪಾಡ್ತೀನಿ .. ಯು ಡೋಂಟ್ ವರಿ.. ಮಳೆ ನಿಂತ ಮೇಲೆ ಬಾ.. ಓಕೆ ನಾ" ಎಂದು ಹೇಳಿ ನನ್ನನ್ನು ಒಪ್ಪಿಸಿದಳು.. ನಾನು ಸಹ ಇಲ್ಲಿ ಕವನ ಬಂದಿದ್ದಾಳೆ ಅವಳ ಜೊತೆಗೂ ಮಾತಾಡಬೇಕು ಅಂತಾ ಮನದಲ್ಲೇ ನೆನೆದು "ಸರಿ ಪ್ರಿಯ ಓಕೆ ಆಮೇಲೆ ಬರುವೆ.. ಟೆಕ್ ಕೇರ್ ಪ್ರಿಯ" ಎಂದು ಹೇಳಿ ಮೊಬೈಲ್ ಆಫ್ ಮಾಡಿದೆ.. ಮತ್ತೆ ಮೊಬೈಲ್ ಅನ್ನು ಸ್ವಲ್ಪ ಚಾರ್ಜ್ ಮಾಡಲು ಪಿನ್ ಹಾಕಿ , ಸ್ವಿಚ್ ಒತ್ತಿ , ನನ್ನ ಮತ್ತೊಂದು ಮೊಬೈಲ್ ಅನ್ನು ಬೀರುವಿನ ಒಳಗಿಂದ ಹೊರ ತೆಗೆದು , ಶರ್ಟ್ ಜೇಬಿನಲ್ಲಿ ಇಟ್ಟುಕೊಂಡೆ .. (ಅದು ನನ್ನ ಪರ್ಸನಲ್ ಮೊಬೈಲ್.. ಅದು ಫ್ಯಾಮಿಲಿ , ಫ್ರೆಂಡ್ಸ್ & ರಿಲೇಟಿವ್ಸ್ ಮಾತ್ರ) .. ರೂಂ ಇಂದ ಹೊರಗೆ ಬರುತ್ತಿದಂತೆಯೇ ಕವನ ಪೇಪರ್ ಓದುತ್ತ ಇರುವುದನ್ನು ಕಂಡು "ಕವನ ಹಾಲು ಬಿಸಿಗಿಟ್ಟಿದ್ದೆ , ನಿನಗೆ ಹೇಳಿ ಹೋಗಿದ್ದೆ" ಎಂದು ಹೇಳಿದೆ.. ಅದಕ್ಕವಳು "ಅಂಕಲ್ ಹಾಲು ಬಿಸಿಯಾಗಿದೆ.. ಓಲೆ ಆಫ್ ಮಾಡಿದ್ದೇನೆ" ಎಂದು ಹೇಳಿದಳು.. ಪೇಪರ್ ಅನ್ನು ಹಾಗೆಯೇ ಟೀಪಾಯಿ ಮೇಲೆ ಇಟ್ಟು . ಮನೆಯನ್ನೆಲ್ಲಾ ಕುಳಿತಲ್ಲೇ ಒಂದು ಸುತ್ತು ನೋಡುತ್ತಾ , ಕಿಟಕಿಯ ಬಳಿ ಹೋಗಿ ನಿಂತು ಹೊರಗೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ನಿಂತಳು.. 

ನಾನು ಕೂಡಲೇ "ಸ್ವಲ್ಪ ಇರು ಕಾಫಿ ಮಾಡಿಕೊಂಡು ಬರುತ್ತೇನೆ" ಎಂದು ಹೇಳಿ , ಅಡುಗೆಮನೆಯ ಒಳಗೆ ಹೋದೆ.. ಬಿಸಿ ಬಿಸಿ ಹಾಲನ್ನು ಎರಡು ಕಪ್ ಅಲ್ಲಿ ಹಾಕಿ , ಅದಕ್ಕೆ ಒಂದೊಂದೇ ಚಮಚ ಸಕ್ಕರೆ ಸೇರಿಸಿ , ಕಾಫಿ ಪುಡಿಯ ಪೊಟ್ಟಣವನ್ನು ಕತ್ತರಿಸಿ , ಸ್ವಲ್ಪ ಸ್ವಲ್ಪ ಪುಡಿಯನ್ನು ಕಪ್`ಗಳಲ್ಲಿ ಹಾಕಲು ಕೈ ಚಾಚುತ್ತಿದ್ದಂತೆಯೇ , ನನ್ನ ಮೊಬೈಲ್ ರಿಂಗ್ ಆಯಿತು.. "ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ.. ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ.. ಕನ್ನಡ ಡಿಂಡಿಮ ಬಾರಿಸುವೆ .. ಎಂದೂ ಬರೆಯುವ ಬಾಳುವೆ.. ಕನ್ನಡ ಡಿಂಡಿಮ ಬಾರಿಸುವೆ .. ಎಂದೂ ಬರೆಯುವ ಬಾಳುವೆ" ಆಗ ತಕ್ಷಣ ಕಾಫಿ ಪುಡಿಯ ಪೊಟ್ಟಣವನ್ನು ಪಕ್ಕದಲ್ಲೇ ಇಟ್ಟು.. ಫೋನ್ ಕಾಲ್ ರಿಸೀವ್ ಮಾಡಿ "ಹಲೋ ಪ್ರಿಯ ಮತ್ತೇನು ವಿಷಯ" ಎಂದು ಕೇಳಿದೆ.. ಅದಕ್ಕವಳು "ಈಗ ಆ ಬುಕ್ ಅನ್ನು ಓದುವ ಮನಸ್ಸಾಗಿದೆ.. ನಾನು ಅದನ್ನು ಓದಬಹುದೇ .. ಓದುವ ಕುತೂಹಲ ಹೆಚ್ಚುತ್ತಿದೆ .. ಏನಿದೆ ಅದರಲ್ಲಿ" ಅಂತೆಲ್ಲಾ ಕೇಳಿದಳು ... ನಾನು "ಓದು ಆದರೆ ಪುಸ್ತಕ ಜೋಪಾನ.. ಇನ್ನೇನು ಮಳೆ ನಿಲ್ಲುವ ಲಕ್ಷಣಗಳು ಕಾಣುತ್ತಿದೆ.. ನಾನು ಅದಷ್ಟೇ ಬೇಗನೆ ಬರುವೆ" ಎಂದು ಹೇಳಿ ಫೋನ್ ಇಟ್ಟೆ.. 

ಮತ್ತೆ ಕಾಫಿ ಪುಡಿಯ ಪೊಟ್ಟಣವನ್ನು ಕೈಗೆತ್ತುಕೊಂಡು ಪುಡಿಯನ್ನು ಸುರಿದು , ಎಲ್ಲವನ್ನು ಚಮಚದಲ್ಲಿ ಚೆನ್ನಾಗಿ ಕಲಿಸಿ ಮಿಶ್ರಣ ಮಾಡಿ ಅಲ್ಲಾಡಿಸಿದೆ .. ಕುಡಿಯಲು ಬಿಸಿ ಬಿಸಿ ಕಾಫಿ ತಯಾರಾಗಿತ್ತು.. ಎರಡು ಕಪ್`ಗಳನ್ನೂ ಕೈಯಲ್ಲಿ ಹಿಡಿದುಕೊಂಡು ಕವನ ಇದ್ದಲ್ಲಿಗೆ ಹೋದೆ.. ಆದರೆ ಅವಳು ಇನ್ನೂ ಕಿಟಕಿಯ ಹೊರಗೆ ನೋಡುತ್ತಿದ್ದಳು .. ಕವನ ಎಂದು ಕೂಗಿದಾಗ ಮೆಲ್ಲನೆ ನನ್ನ ಕಡೆ ತಿರುಗಿದಳು .. ಅವಳ ಮುಖದಲ್ಲಿ ಬೇಸರವಿತ್ತು .. ಮೆಲ್ಲನೆ ಹನಿ ಹನಿ ಕಣ್ಣೀರು ಬರುತ್ತಿತ್ತು .. ಕಾಫಿಯ ಕಪ್ ಅವಳ ಕೈಯಲ್ಲಿ ಕೊಡುತ್ತಾ , ಏಕೆ ಏನಾಯಿತು ಕಣ್ಣೀರು ಏಕೆ ಎಂದು ಕೇಳುತ್ತಾ ನನ್ನ ಕೈಯಿಂದ ಅವಳ ಕಣ್ಣಿರನ್ನು ಒರೆಸಿದೆ.. "ಬಾ ಕೂತು ಮಾತಾಡೋಣ" ಎಂದು ಹೇಳಿ ಕರೆದು , ನಾನು ಚೇರಿನಲ್ಲಿ ಕೂರುತ್ತಾ ಕಾಫಿ ಕುಡಿಯಲು ಆರಂಭಿಸಿದೆ .. ಆದರೆ ಅವಳು ಅಲ್ಲಿಯೇ ಕಿಟಕಿಯ ಬಳಿ ನಿಂತು ಹೊರಗೆ ನೋಡುತ್ತಾ ಕಾಫಿ ಕುಡಿಯುತ್ತಾ , ಇಪ್ಪತ್ತು ವರ್ಷದ ಹಿಂದಿನ ಕಥೆಯನ್ನು ಆರಂಭಿಸಿದಳು ... ಅವಳು ಹೇಳುವ ಪ್ರತೀ ಸಾಲುಗಳು ನನ್ನ ಜೀವನದ ಕಥೆಯೇ ಆಗಿತ್ತು .. ಆ ದಿನಗಳ ನೆನಪನ್ನು ಮತ್ತೆ ನನ್ನಲ್ಲಿ ಮೂಡಿಸುತ್ತಿದ್ದವು.. ಕಲ್ಪಿಸಿಕೊಂಡರೆ ಕಣ್ಣೆದುರಲ್ಲೇ ಆ ಹಳೆಯ ದಿನಗಳು ಮತ್ತೆ ಹಿಂತಿರುಗಿ ಬಂದಂತೆ ನನ್ನಲ್ಲಿ ಏನೋ ಒಂದು ಹೊಸ ಅನುಭವವನ್ನು ತಂದುಕೊಟ್ಟವು..
(ಮುಂದುವರೆಯುವುದು.....)

No comments:

Post a Comment