Friday, 29 June 2012

"ಭಗವಂತ ಬರೆದ ಹಣೆ ಬರಹ"


"ಭಗವಂತ ಬರೆದ ಹಣೆ ಬರಹ" 
***************************

"ಭಗವಂತ ಬರೆದ ಹಣೆ ಬರಹ"
ನಾ ಬರೆದ ಕಥೆಯ ತಲೆ ಬರಹ
ಕಥೆಯಲ್ಲಿದೆ ಪ್ರೇಮಿಗಳ ವಿರಹ
ಹಳೆಯ ಕಥೆಯು ಹೊಸ ತರಹ

ಸೇರುವರು ಹೇಗೆ ಅವರು ಸನಿಹ
ತಿಳಿದಿಲ್ಲ ಯಾರಿಗೂ ನನ್ನ ವಿನಹ
ಊರಾಚೆ ಕಾರ್ಮಿಕರ ಸಮೂಹ
ಆಗಿತ್ತಲ್ಲೊಂದು ರಹಸ್ಯ ವಿವಾಹ

ನಿಧಿ ಇದೆ ಎಂಬ ಊಹಾ ಪೂಹ
ಹಿಡಿದಿತ್ತು ಹಣದ ಹುಚ್ಚು ಮೋಹ
ನಡೆಯುತ್ತಿತ್ತು ನಿಲ್ಲದ ರಕ್ತದ ದಾಹ
ನೆಲ ಅಗೆದಾಗ ಸಿಕ್ಕಿತ್ತು ಹೂತಿಟ್ಟ ದೇಹ

|| ಪ್ರಶಾಂತ್ ಖಟಾವಕರ್ ||
"ಭಗವಂತ ಬರೆದ ಹಣೆ ಬರಹ"
ಈ ಒಂದು ಕಾಲ್ಪನಿಕ ಕಥೆಯ ಆರಂಭವು ಜುಲೈ ಒಂದರಂದು .. ಸಸ್ಪೆನ್ಸ್ ಸ್ಟೋರಿ ಬ್ಲಾಗಿನಲ್ಲಿ .... ನೋಡಿ , ಓದಿ , ಅನಿಸಿಕೆ ಹಂಚಿಕೊಳ್ಳಿ .. ಏನು ಎಲ್ಲಿ ಹೇಗೆ ಏಕೆ ಎಲ್ಲದರ ವಿವರ
ಜುಲೈ ಒಂದನೇ ತಾರೀಕು .. >>>>>
"ಭಗವಂತ ಬರೆದ ಹಣೆ ಬರಹ"

1 comment:

  1. ಹೊಸ ಕಥನಕ್ಕೆ ಶೀರ್ಷಿಕೆ ಗೀತೆ ಅಮೋಘವಾಗಿದೆ ಪ್ರಶಾಂತೂ.

    ಓಪನ್ನಿಂಗೇ ಹಿಂಗಿದ್ದರೆ ಇನ್ನು ಸಿನಿಮಾ ಮಸ್ತು ಅನ್ನಿ...

    ReplyDelete