Wednesday, 14 March 2012

ಆತ್ಮ ಬಂಧನ



ಆತ್ಮ ಬಂಧನ
*************

ಹಾಳೆ ಪೂರ ಖಾಲಿ ಇತ್ತು 
ಬರೆಯಲು ಕವನ ನೆನಪಲ್ಲಿತ್ತು

ಕೈಯಲ್ಲಿ ಕೆಂಪು ಬಣ್ಣದ ಕುಂಚ
ಪ್ರೀತಿಯ ಕಲ್ಪನೆಯ ಚಿತ್ರಿಸಲು
ಪದಗಳಿಗೆ ಚಿತ್ರ ರೂಪ ನೀಡಲು
ಎದುರಾಯಿತು ಒಂದು ಸವಾಲು
ಆರಂಭ ಹೇಗೆಂಬ ಹೊಸ ದಿಗಿಲು

ಹಾಳೆ ಪೂರ ಖಾಲಿ ಇತ್ತು 
ಬರೆಯಲು ಕವನ ನೆನಪಲ್ಲಿತ್ತು

ಮಾವನ ಮಗಳ ಮುದ್ದಿನ ಗೊಂಬೆ
ಮೇಜಿನ ಮೇಲೆ ಕೂತು ಕರೆದಂತೆ
ಕರಾಳ ರಾತ್ರಿಯಲ್ಲಿ ವಿಚಿತ್ರ ಚಿಂತೆ
ಗೊಂಬೆಯ ಕಣ್ಣು ಕೆಂಪು ಕೆಂಡದಂತೆ
ಆತ್ಮಬಂಧನ ಆ ದಿನಗಳ ನೆನಪಿನಂತೆ

ಹಾಳೆ ಪೂರ ಖಾಲಿ ಇತ್ತು 
ಬರೆಯಲು ಕವನ ನೆನಪಲ್ಲಿತ್ತು

ಕೂತೂಹಲ ಕಲ್ಪನೆ ನಾನೇ ಶಶಿಕುಮಾರ
ಜಯಪ್ರದ ಕನಸು ಕಾಣುವ ಕನಸುಗಾರ
ಪದಗಳ ಸೇರಿಸುವಲ್ಲಿ ಗೊಂಬೆಯ ಗೀತೆ
     ಕೂಗಿತ್ತು ನನ್ನನ್ನು ಬಾ..!! ಇದು ಗೊತ್ತೇ.. ?
     ಅಯ್ಯೋ ದೇವ ಕನಸೋ ನನಸೋ ನಾ ಸತ್ತೆ..

ಹಾಳೆ ಪೂರ ಖಾಲಿ ಇತ್ತು 
ಬರೆಯಲು ಕವನ ನೆನಪಲ್ಲಿತ್ತು

ಕೊನೆಗೂ ಎದ್ದೆ ನಾನು ನಿದ್ದೆಯಿಂದ
ಕನಸಿನ ಕಥೆಯ ಕವನವಾಗಿ ಕಟ್ಟಲು
ಭಯದಲ್ಲೂ ಬರೆಯುವ ಆಸೆ ಹುಟ್ಟಲು
ಕಥೆಗಾರ ನಾನು ಬರೆಯುವೆ ಕನಸಲ್ಲೂ
     ವಿಸ್ಮಯ ರಹಸ್ಯ ಪ್ರತಿ ಸಾಲು ಸಾಲಿನಲ್ಲೂ.. :)

ಹಾಳೆ ಪೂರ ಖಾಲಿ ಇತ್ತು 
ಬರೆಯಲು ಕವನ ನೆನಪಲ್ಲಿತ್ತು
ಕನಸಲ್ಲಿ ಮಾತ್ರ ಹೀಗೆ ಇತ್ತು
ನೀವ್ಯಾರು ನಂಬೋದಿಲ್ಲ ಗೊತ್ತು
     ಆದರೂ ಈ ಕವನ ಬೇಕೇ ಬೇಕಿತ್ತು .. :)

     || ಪ್ರಶಾಂತ್ ಖಟಾವಕರ್ ||

4 comments:

  1. ಆತ್ಮಬಂಧನ ನಾವು ಚಿಕ್ಕಂದಿನಲ್ಲಿ ನೋಡಿದ್ದ ಚಿತ್ರ ನೆನಪಿಸಿದ್ದಕ್ಕೆ ಧನ್ಯವಾದಗಳು. ಚೆನ್ನಾಗಿದೆ ನಿಮ್ಮ ಕವನ.

    ReplyDelete
    Replies
    1. ಕವನ ನಿಜವಾದ ಕನಸು ಆದರೂ ಕೆಲವು ಸಾರಿ ಕನ್ನಡದ ಹಳೆಯ ಚಲನಚಿತ್ರಗಳ ನೆನಪು ಮಾಡಿಸುವುದು ನಮ್ಮ ಹವ್ಯಾಸ .. ಅಂತಹುಗಳಲ್ಲಿ ಇದು ಐದನೇ ಕವನ.. ಇದಕ್ಕೆ ಕೆಲವು ಸಾಲುಗಳಲ್ಲಿ ಮಾರ್ಪಾಡು ಮಾಡಲಾಗಿದೆ.. ಕಾರಣ ನಮ್ಮ ಕಲ್ಪನೆಯ ಚಿತ್ರ ಇದಕ್ಕೆ ಸಿಗಲಿಲ್ಲ.. ನಿಮಗೆ ಇದು ಇಷ್ಟವಾಗಿದ್ದು ಖುಷಿಯಾಗಿದೆ .. ವಂದನೆಗಳು ಸರ್.. :)

      Delete
  2. ಈ ನಡುವಿನ ನಿಮ್ಮ ಕವನಗಳಲೆಲ್ಲ ಇದು ಅತ್ಯುತ್ತಮ ಕವನ ಕಟವಾಕರ್. ಬರವಣಿಗೆಯ ಓಘ ಕಾದುಕೊಂಡು, ಕಾವ್ಯಾತ್ಮಕ ಗುಣಗಳನ್ನೂ ಉಳಿಸಿಕೊಂಡು ಆಶಯವನ್ನು ಕಟ್ಟಿಕೊಟ್ಟಿದ್ದೀರ.

    ಭೇಷ್...!!!

    ReplyDelete
    Replies
    1. ತುಂಬಾ ತುಂಬಾ ಖುಷಿ ಆಯಿತು ಸರ್ ನಿಮ್ಮ ಪ್ರತಿಕ್ರಿಯೆ ನೋಡಿ. & ಇದು ನಿಜವಾಗಲು ಕನಸು ಆದರೂ ಸಹ .. ಆಗಾಗ ಕೆಲವು ಸಾರಿ ಹಳೆಯ ಕನ್ನಡ ಚಲನಚಿತ್ರಗಳ ನೆನಪನ್ನು ಕವನದ ಒಂದೆರಡು ಸಾಲುಗಳಿಗೆ ಸೇರಿಸೋದು ನಮ್ಮ ಒಂದು ಹವ್ಯಾಸ .. ಆ ರೀತಿಯಲ್ಲಿ ಇದು ಐದನೇ ಕವನ.. :) ನಿಜ ಸರ್ ಇತ್ತೀಚಿಗೆ ಕವನಗಳ ರಚನೆಯ ವಿವಿಧ ಶೈಲಿಯನ್ನು ಅನೇಕ ರೀತಿಯ ಪ್ರಯೋಗವನ್ನು ಸ್ನೇಹಿತರ ಕೆಲವು ಬ್ಲಾಗ್ ಅಲ್ಲಿ ಅಧ್ಯಯನ ಮಾಡುತ್ತಿದ್ದೇವೆ.. ಇದು ಮೊದಲ ಹಂತವಷ್ಟೇ ಇನ್ನೂ ಬದಲಾವಣೆಗಳಿಗೆ ಸ್ವಲ್ಪ ಕಾಲ ಹಿಡಿಯಬಹುದು .. ನಿಮಗೆ ಸಂಪೂರ್ಣ ಮೆಚ್ಚುಗೆ ಆಗಿದ್ದು.. ಬಹಳಾನೇ ಖುಷಿಯಾಗಿದೆ.. ನಿಮಗೆ ಹೃತ್ಪೂರ್ವಕ ವಂದನೆಗಳು ಸರ್.. :)

      Delete