ಇದು ನನ್ನ ಕವನ (ಒಂದು ಪ್ರಶ್ನೆ)
******************************
ನಾ ಮಲಗುವ ಮುನ್ನ
ನೋಡಿದೆ ಕನ್ನಡಿಯನ್ನ
ನನ್ನನ್ನೇ ನಾನು ನೋಡಿ
ಬಂದೆ ಬರೆಯಲು ಓಡೋಡಿ
ಕಟ್ಟಲು ಪದಗಳ ಉಗಿಬಂಡಿ
ಏರಲು ಕಲ್ಪನೆಯ ಎತ್ತಿನ ಗಾಡಿ
ನಾ ಮಲಗುವ ಮುನ್ನ
ನೋಡಿದೆ ಕನ್ನಡಿಯನ್ನ
ಮೊದಲ ನೋಟದ ಮೋಡಿ
ನೆನಪುಗಳ ಜೊತೆಗೂಡಿ
ಬಂದವು ಹಾಡಿ ಕುಣಿದಾಡಿ
ಭಾವನೆಗಳಿಗೆ ಬೆಲೆ ನೀಡಿ
ನಾ ಮಲಗುವ ಮುನ್ನ
ನೋಡಿದೆ ಕನ್ನಡಿಯನ್ನ
ನನ್ನ ಚೆಲುವ ಹೊಗಳಲು
ಸಾಲದು ಪದಗಳ ಸಾಲು
ಕನಸಿನ ರಾಜ ಮಾಮೂಲು
ಬೇರೇನೂ ಸಿಕ್ಕಿಲ್ಲ ಬರೆಯಲು
ನಾ ಮಲಗುವ ಮುನ್ನ
ನೋಡಿದೆ ಕನ್ನಡಿಯನ್ನ
ಗೆಳಯ ಗೆಳತಿಯರ ಮಾತು
ಆಂಗ್ಲ ಪದದ ವರ್ಣನೆ ಇತ್ತು
ಕನ್ನಡ ಪದ ಓದುವ ಆಸೆಯಿತ್ತು
ಕನ್ನಡ ಬರೆಯಲು ಯಾರಿಗೆ ಗೊತ್ತು ????
ನಾ ಮಲಗುವ ಮುನ್ನ
ನೋಡಿದೆ ಕನ್ನಡಿಯನ್ನ .. :)
|| ಪ್ರಶಾಂತ್ ಖಟಾವಕರ್ ||
No comments:
Post a Comment