Sunday 6 November 2011

ರಾಜಕುಮಾರಿಯ ಪ್ರೀತಿಯ ಕಥೆ ... ಕವನ ರೂಪದಲ್ಲಿ... ಹೊಸ ಹೊಸ ಭಾವನೆಯ ಕಲ್ಪನಾ ಲೋಕದಲ್ಲಿ.... :)


ಮಹಾರಾಜನೇ.. ಇಲ್ಲದ ದೂರದ ಊರಿನಲ್ಲಿ...
ಒಬ್ಬ ರಾಜಕುಮಾರಿಯು ಇರುವಳಂತೆ ಅಲ್ಲಿ...
ಬಂಧನದೊಳು ಇರುವಳು ದುಷ್ಟನ ಸೆರೆಯಲ್ಲಿ....
ಬಿಡಿಸಲು ಹೊರಟಿರುವೆವು ಅವಳನು ನಾವಿಲ್ಲಿ...
ಚೆಲುವನೊಬ್ಬ ಬೆಟ್ಟದ ಮೇಲಿಂದ ಹಾರಿ ಬಂದಿದ್ದ
ಬೆಳ್ಳನೆ ಹೊಳಪು, ಚಿನ್ನದ ಖಡ್ಗ ಕೈಯಲ್ಲಿ ಹಿಡಿದಿದ್ದ
ಮಿಂಚಿನ ಹಾಗೆ ಓಡೋ ಕುದುರೆಯ ಮೇಲೆ ಕೂತಿದ್ದ
ರಾಜಕುಮಾರಿಯ ಹುಡುಕಲು ಅವನು ಹೊರಟಿದ್ದ....
ಸಿಡಿಲಿನ ವೇಗ , ಗುಡುಗಿದ ಈಗ  "ಓ ಪ್ರಿಯ ಪ್ರಿಯಾ"
ನಿನ್ನ ಬಿಡಿಸಲು ಬರುತಿರುವ ಈ ಪ್ರೀತಿಯ ಇನಿಯಾ..
ಚಿನ್ನ ನಿನ್ನ ನೋಡಲೆಂದೇ ಕಾಯುತಿದೆ ನನ್ನ ಈ ಹೃದಯಾ...
ನನ್ನ ಸದ್ದನು ಕೇಳಿ,  ನೀ ಇರುವ ಗುರುತನು ಹೇಳುವೆಯಾ...
ಗುಹೆಯ ಕತ್ತಲಲ್ಲಿ.. ಒಂದು ಕಾಡಿನ ನಡುವಲ್ಲಿ...
ಈ ದುಷ್ಟನ ದೊಡ್ಡ ಮರದ  ಗುಡಿಸಲಿನ  ಪಕ್ಕದಲ್ಲಿ...
ನೀ ಬರುವೆ ಎಂಬ  ನಂಬಿಕೆಯಲ್ಲಿ ಒಬ್ಬಳೇ ನಾನಿಲ್ಲಿ...
ಭಯದಲಿ ಕೂಗುತ ಕರೆದಳು ಚೆಲುವನ ಅವಳಿಲ್ಲಿ....
ಬಂದನು ಚೆಲುವನು , ಕಂಡನು ಗುಹೆಯನ್ನು...
ರಕ್ತವ ಕುಡಿಯುತ , ನರಮಾಂಸ ತಿನ್ನುವ ದುಷ್ಟನನ್ನು...
ಕೋಪದಿ ಬೀಸಿದ ಗರ ಗರ ತಿರುಗಿಸಿ ಚಿನ್ನದ ಖಡ್ಗವನ್ನು...
ಒಂದೇ ಹೊಡೆತದಿ ಕತ್ತರಿಸಿದ ದುಷ್ಟನ ತಲೆಯನ್ನು...
ಬಿಡಿಸಿದ ರಾಜಕುಮಾರಿಯ ಬಂಧನವನ್ನು...
ಕತ್ತಲ ಗುಹೆಯಿಂದ ಅವಳನು ಹೊರ ತಂದನು..
ಸೂರ್ಯನ ಕಿರಣದಿ ಬೆಳಗುವ ಅವಳ ರೂಪವನ್ನು..
ನೋಡಿ ನಕ್ಕನು , ಕುಣಿದನು, ಜಿಗಿದನು, ಎಲ್ಲವನ್ನು ಮರೆತನು...
ಕೊನೆಯಲ್ಲಿ ಏನಾಯಿತೋ ತಿಳಿಯಲಿಲ್ಲ...
ಅವನು ಪ್ರೀತಿಯು ಹೆಚ್ಚಾಗಿ ಹುಚ್ಚನಾದನಲ್ಲ..
ಯಾರೇ ನೀನು ಚೆಲುವೆ ಎಂದು ಕೇಳಿದನಲ್ಲ...
ರಾಜಕುಮಾರಿಯು ಪ್ರೀತಿಯಲ್ಲಿ ಮುತ್ತಿಟ್ಟಳಲ್ಲಾ...
ತಕ್ಷಣದಲ್ಲೇ  ಆ ಚೆಲುವನು ಅಲ್ಲೇ ಕಪ್ಪೆಯಾದನಲ್ಲ... !!!!!
ಕಥೆ ಬದಲಾಗಿದೆ.. ಜನ ಬದಲಾವಣೆ ಬೇಕೆನ್ನುತ್ತಾರಲ್ಲ... :)




|| ಪ್ರಶಾಂತ್ ಖಟಾವಕರ್ ||

1 comment:

  1. ಚೆನ್ನಾಗಿದೆ ಕಣ್ರಿ.. ಹೀರೋನ ಹಿಂಗೆಲ್ಲ ತೆಗಿಬೇಡ್ರೀ :-) :-)
    ಮತ್ತೊಮ್ಮೆ ಬರುವೆ .. ಬಂದಾಗ ಓದುವೆ..

    ReplyDelete