Friday, 18 January 2013

ಕಥೆಯಲ್ಲಿನ ಸಂಭಾಷಣೆಯ ಒಂದು ತುಣುಕು .. :)ಕಥೆಯಲ್ಲಿನ ಸಂಭಾಷಣೆಯ ಒಂದು ತುಣುಕು 
****************************************
(ನಾಯಕ ಮತ್ತು ಅವನ ಗೆಳಯನ ನಡುವೆ ಒಂದು ಮಾತುಕತೆ)

ನಾಯಕನ ಗೆಳಯ :- (ನಾಯಕನಿಗೆ ಸಮಾಧಾನದ ಮಾತು)
------------------------------------------------------------------
ಸರಿ ಇರೋವರೆಗೂ ..
ಎಲ್ಲಾ ಸೈಲೆಂಟ್ ಇರ್ತಾರೆ ..
ತಪ್ಪು ಆಯ್ತು ಅಂದ್ರೆ ಸಾಕು
ಯಾಕ್ ಆಯ್ತು ಯೋಚನೆ ಮಾಡೋಲ್ಲ 
ಎಲ್ಲಾ ಜನ ಸಿಕ್ಕಾಪಟ್ಟೆ ವೈಲೆಂಟ್ ಆಗ್ತಾರೆ .. 
ಈ ಜಗತ್ತೇ ಹೀಗೆ .. 
ಆ ಜನಗಳೇ ಹಾಗೆ..
ನೀನ್ ಯಾವುದಕ್ಕೂ ಯೋಚನೆ ಮಾಡಬೇಡ ..
.
.
ನಾಯಕ :- (ನಾಯಕನ ಬೇಸರ ಮಾತುಗಳು)
-------------------------------------------------------
ಅಯ್ಯೋ .. ನಿನಗೇನ್ ಗೊತ್ತೋ 
ಸುಮ್ನಿದ್ರೆ ಜನ ನಮ್ನ ಹೇಡಿ ಅಂತಾರೆ 
ಎದುರು ಮಾತಾಡಿದ್ರೆ ರೌಡಿ ಅಂತಾರೆ 
ನಾಲ್ಕ್ ದಿನ ಸುಮ್ನಿರೋಣ ಅಂತಾ 
ನಾನು ಸುಮ್ನಿದ್ರೆ 
ಶುರು ಮಾಡೇ ಬಿಟ್ಟಿದ್ದಾರೆ ..
ನಂಗೆ ಹೊಸ ಹೊಸ ಹೆಸರಿಡೋದನ್ನ 
ವಿಚಿತ್ರ ಬೈಗುಳಗಳ ಬಿರುದು ಕೊಡೋದನ್ನ 
ನಾವ್ ಏನ್ ಕೇಡು ಮಾಡಿದ್ವೋ ಈ ಜನಗಳಿಗೆ 
ಸುಮ್ಮನಿರೋದು ತಪ್ಪು ಅಂತಾರೆ 
ನ್ಯಾಯವಾಗಿ ದುಡ್ದು ನಾಲ್ಕ್ ಕಾಸ್ ಕೂಡಿಸಿಟ್ರೇ 
ಏನೋ ಮಾಡ್ಬಾರದನ್ನೇ ಮಾಡಿದ್ದಾನೆ ಅಂತಾರೆ ..
ಯಾಕೋ ಗೆಳಯಾ ಹಿಂಗಿದೆ ಈ ಲೋಕ ..
ಕೆಲವೊಮ್ಮೆ ಅನ್ಸುತ್ತೆ ಕಣೋ ..
ಈ ಕೆಟ್ಟ ಬದುಕು ನಮ್ಗೆ ಬೇಕಾ .. ?

|| ಪ್ರಶಾಂತ್ ಖಟಾವಕರ್ ||

2 comments:

  1. ಚೆನ್ನಾಗಿದೆ. ಮುಂದುವರ್ಸಿ :-)

    ReplyDelete
  2. ಯಾರಿಗೆ ಬೇಕೋ ಈ ಲೋಕ ಅಂದರೆ...
    ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ ಎನ್ನುವ ಹಾಗಿರುತ್ತೆ..
    ಸುಂದರವಾಗಿದೆ ದ್ವಂದ್ವ ಯುದ್ದ ಮುಂದುವರೆಯಲಿ..

    ReplyDelete