Saturday 2 February 2013

ಅಪರಿಚಿತ ಅವನ್ಯಾರೋ ?


      

     ದೂರದಲ್ಲಿ ಓಡುತ್ತಿದ್ದ ವ್ಯಕ್ತಿಯನ್ನು ಕಂಡು, ಅವನು ಕಳ್ಳನಿರಬಹುದು ಎಂದುಕೊಂಡು, ಹಿಡಿಯಲು ಹಿಂದೆ ಓಡಿದ ನಾಲ್ಕು ಜನ ಸ್ವಲ್ಪ ದೂರ ಓಡಿ, ಸುಸ್ತಾಗಿ ಅಲ್ಲಿಯೇ ಹತ್ತಿರವಿದ್ದ ಮರದ ಕೆಳಗೆ ಹೋಗಿ ನಿಂತರು .. 
ಅದರಲ್ಲಿ ಒಬ್ಬ ಹೇಳಿದ, ಅವನು ಕಳ್ಳನೇ ಇರಬಹುದು, ಅದಕ್ಕೇ ಅವನು ಜೋರಾಗಿ ಓಡಿದ್ದು ಎಂದು....
ಇನ್ನೊಬ್ಬ ಹೇಳಿದ, ಅವನು ಕಳ್ಳ ಅಲ್ಲಾ ಅನಿಸುತ್ತದೆ. ಅವನ ಕೈಗಳಲ್ಲಿ ಏನೂ ಇರಲಿಲ್ಲ. ನನಗನ್ನಿಸಿದಂತೆ ಅವನು ಮತ್ತೊಬ್ಬ ಕಳ್ಳನನ್ನು ಹಿಡಿಯಲು ಜೋರಾಗಿ ಓಡುತ್ತಿರಬಹುದು..
ನಂತರ ಮೂರನೇಯ ವ್ಯಕ್ತಿ ಹೇಳಿದ, ಅವನು ಕಳ್ಳನೂ ಅಲ್ಲ , ಕಳ್ಳನನ್ನು ಹಿಡಿಯಲು ಓಡುತ್ತಿರುವವನೂ ಅಲ್ಲ.. ಅವನು ಪ್ರತೀ ದಿನ ಬೆಳಗ್ಗೆ ಜಾಗಿಂಗ್ ಮಾಡುತ್ತಾನೆ ಅಷ್ಟೇ ..
ಆಗ ತಕ್ಷಣ ನಾಲ್ಕನೇ ವ್ಯಕ್ತಿ ಅಲ್ಲಾ ನೀವೆಲ್ಲಾ ಯಾರ ಬಗ್ಗೆ ಮಾತಾಡ್ತಾ ಇದ್ದೀರಾ ... ಅಲ್ಲಿ ಯಾರು ಓಡಿ  ಹೋಗಿಲ್ಲಾ, ನೀವು ಮೂವರು ಯಾಕೆ ಓಡಿ ಬಂದದ್ದು ಅಂತಾ ನಾ ನಿಮ್ಮ ಹಿಂದೆ ಓಡೋಡಿ ಬಂದೆ... ಏನಾಗಿದೆ ನಿಮಗೆಲ್ಲಾ ?
ಅಲ್ಲಿ ಯಾರೂ ಇಲ್ಲಾ.. !! 
ನನಗನ್ನಿಸುತ್ತೆ ನೀವು ಬೆಳಗ್ಗೆ ಬೆಳಗ್ಗೆನೇ ಕುಡಿದಿರಬಹುದು ಅಂತಾ ಕಾಣುತ್ತೆ..
ಮೊದಲನೇ ವ್ಯಕ್ತಿ, ಇಲ್ಲಾ ಇಲ್ಲಾ ನಾವ್ಯಾರು ಕುಡಿದಿಲ್ಲಾ & ಅಲ್ಲಿ ಒಬ್ಬ ಓಡಿ ಹೋಗಿದ್ದು ನಿಜ .. ನೀ ಇನ್ನೂ ಸ್ವಲ್ಪ ಬೇಗ ಬಂದಿದ್ರೆ ಗೊತ್ತಾಗಿರೋದು ..
ಆಗ ನಾಲ್ಕನೇಯ ವ್ಯಕ್ತಿ, ಓ ಹಾಗಾ ಸರಿ ಸರಿ.. ಅದರೂ ನನಗ್ಯಾಕೋ ನಂಬೋಕ್ಕೆ ಆಗ್ತಿಲ್ಲಾ ಅಲ್ಲಿ ಯಾರೋ ಓಡಿ ಹೋಗಿದ್ದಾರೆ ಅನ್ನೋದು .. & ನೀವು ಕುಡಿದಿರಲೇಬೇಕು ಅಥವಾ ಅದು  ಇಲ್ಲಾಂದ್ರೆ ನೀವು ಯಾವುದೋ ದೆವ್ವ ನೋಡಿರಬೇಕು.. ಆ ದೆವ್ವ ನಿಮ್ಮ ಮೂವರಿಗೂ ಕಂಡಿದೆ ಅಂದ್ರೆ, ಆ ದೆವ್ವಕ್ಕೂ & ನಿಮ್ಮ ಮೂವರಿಗೂ ಏನೋ ಸಂಬಂಧ ಇರಲೇಬೇಕು.. ನೀವು ಮೂರು ಜನ ಸ್ವಲ್ಪ ನಿಮ್ಮ ನಿಮ್ಮ ಹಳೇ ಲೈಫ್ ನೆನಪು ಮಾಡ್ಕೊಳ್ಳಿ ಏನಾಗಿತ್ತು & ನೀವೆಲ್ಲಾ ಯಾರು, ನಿಮಗ್ಯಾರಾದ್ರೂ ಶತ್ರುಗಳು ಇದ್ರಾ, ಅಥವಾ ನೀವು ಗೊತ್ತಿದ್ದೋ , ಗೊತ್ತಿಲ್ಲದೆಯೋ ಯಾರಿಗಾದ್ರೂ ತೊಂದರೆ ಕೊಟ್ಟಿದ್ದು, ಮೋಸ ಮಾಡಿದ್ದು, ತಿಳಿದು ತಿಳಿದು ಕೂಡ ತಪ್ಪು ಮಾಡಿದ್ದು, ಇಲ್ಲಾಂದ್ರೆ ಯಾರನಾದ್ರೂ ಕೊಲೆ ಮಾಡಿದ್ರಾ .. ?

(ಇದುವರೆಗಿನದು ಕಥೆಯ ಆರಂಭ.. & ಇನ್ನು ಮುಂದಿನ ಕಥೆಯು ಸಂಭಾಷಣೆಗಳು ಮತ್ತು ಸನ್ನಿವೇಶಗಳ ಮೂಲಕ ಪಾತ್ರಗಳ ಪರಿಚಯದ ಜೊತೆಯಲ್ಲಿ ಮೂಡಿ ಬರುತ್ತದೆ.. ದಯವಿಟ್ಟು ಕಾದು ನೋಡಿ (ಓದಿ) .....)
ಮುಂದುವರೆದ ಭಾಗ : ಇಂದು ರಾತ್ರಿ ೧೧:೧೧ ಕ್ಕೆ .. :)

|| ಪ್ರಶಾಂತ್ ಖಟಾವಕರ್ ||

(ಕಥೆಯ ಸ್ಫೂರ್ತಿ : ನಾಲ್ಕು ಜನ ನೋಡಿದ್ರೆ ಏನ್ ಅಂತಾರೆ ..)

& ಮತ್ತೊಂದು ವಿಚಾರ ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು, ವಸ್ತು ವಿಚಾರ ಹಾಗೂ  ಸ್ಥಳಗಳೆಲ್ಲವೂ ಕೇವಲ ಕಾಲ್ಪನಿಕ ಮಾತ್ರ .. !!

1 comment:

  1. ನೀವು ಕಥೆಗಳನ್ನು ಹೇಳುವ ಪರಿ ಇಷ್ಟವಾಗುತ್ತದೆ..ಕಾಯುತ್ತಿರುವೆ...ಮುಂದುವರೆಸಿ...

    ReplyDelete